ಟ್ರ್ಯಾಂಗ್ಯುಲಮ್
	ಆಕಾಶದ 88 ನಕ್ಷತ್ರಪುಂಜಗಳ ಪೈಕಿ ಒಂದು. ಇದರ ವ್ಯಾಪ್ತಿ 1 ಗಂ. 30ಮಿ. ಮತ್ತು 2 ಗಂ. 50 ಮಿ. ವಿಷುವದಂಶ (ರೈಟ್ ಅಸೆನ್ಯನ್) ಮತ್ತು +25 ಮತ್ತು 37 ಘಂಟಾವೃತ್ತಾಂಶ (ಡೆಕ್ಲೀನೇಶನ್). ತ್ರಿಕೋಣಿ ಎಂಬುದು ಪರ್ಯಾಯ ನಾಮ. ಮೇಷರಾಶಿಯ ಪಕ್ಕದಲ್ಲಿ ಕಾಣುವ ಇದನ್ನು ಸುಲಭವಾಗಿ ಗುರುತಿಸಬಹುದು. ಚಾಲ್ರ್ಸ್ ಮೆಸ್ಯೆ ಗುರುತಿಸಿದ ಪಟ್ಟಿಯಲ್ಲಿ 33ನೆಯ ನಮೂದು ಒ 33 ಈ ನಕ್ಷತ್ರಪುಂಜದ ದಿಕ್ಕಿನಲ್ಲಿದೆ. ದುರ್ಬೀನು, ಸಣ್ಣದೂರದರ್ಶಕಗಳಿಗೆ ಕಾಣುವ ಇದು ಸಮೀಪದ ಗ್ಯಾಲಕ್ಸಿಗಳಲ್ಲೊಂದು. ಸುರುಳಿ ಆಕಾರವನ್ನು ಸ್ಪಷ್ಟವಾಗಿ ಕಾಣಬಹುದು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ